ಕೋಸ್ಟಲ್ ಟಾಕ್ ನ್ಯೂಸ್ | ಮೈಸೂರು
"ದೇಶ-ವಿದೇಶಗಳಿಂದ ವೈಭವದ ಮೈಸೂರು ದಸರಾ ವೀಕ್ಷಣೆ ಮಾಡುತ್ತಿರುವ ಎಲ್ಲರಿಗೂ ತಾಯಿ ಚಾಮುಂಡೇಶ್ವರಿಯ ಅನುಗ್ರಹ ದೊರೆತು, ದುಃಖ ನಿರವಾರಣೆಯಾಗಲಿ" ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಹೇಳಿದರು. ಮೈಸೂರು ವಿಮಾನ ನಿಲ್ದಾಣನದಲ್ಲಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಬುಧವಾರ ಪ್ರತಿಕ್ರಿಯೆ ನೀಡಿದರು.
"ಯುವಕರು-ಯುವತಿಯರು ರೀಲ್ ಗಳನ್ನು ಮಾಡಿ ಇಡೀ ದೇಶಕ್ಕೆ ದಸರಾ ಪರಿಚಯ ಮಾಡಿಕೊಟ್ಟಿದ್ದಾರೆ. ದಸರಾ ವೀಕ್ಷಣೆಗೆ ಆಗಮಿಸಿರುವ ಎಷ್ಟೋ ಮಂದಿಗೆ ರೂಮುಗಳು ಸಿಗುತ್ತಿಲ್ಲ ಎನ್ನುವ ಮಾಹಿತಿ ಬಂದಿದೆ. ಎಲ್ಲಕಡೆ ರೂಮುಗಳು ಭರ್ತಿಯಾಗಿವೆ. ಎಲ್ಲೂ ಕೂಡ ಸಂಚಾರ ದಟ್ಟಣೆ ಆಗದಂತೆ ನಮ್ಮ ಪೊಲೀಸ್ ಇಲಾಖೆ ದಕ್ಷತೆಯಿಂದ ಕೆಲಸ ಮಾಡುತ್ತಿದೆ" ಎಂದರು.
"ಏರ್ ಶೋ, ಕಂಬಳ ಬಹಳ ಚೆನ್ನಾಗಿ ಆಗಿದೆ ಎಂದು ನಮ್ಮ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಿಳಿಸಿದ್ದಾರೆ. ಯಶಸ್ಸಿಗೆ ಎಲ್ಲರ ಸಹಕಾರ ಮುಖ್ಯ. ಇನ್ನು ಮುಂದೆ ನಡೆಯುವ ಕಾರ್ಯಕ್ರಮಗಳನ್ನು ನೋಡಿ, ಅಭಿಪ್ರಾಯವನ್ನು ತಿಳಿಸಿ. ನಿಮ್ಮ ಸಹಕಾರ ಇದಕ್ಕೆ ಬಹಳ ಮುಖ್ಯ" ಎಂದು ಹೇಳಿದರು.