ಕೋಸ್ಟಲ್ ಟಾಕ್ ನ್ಯೂಸ್ | ಉಡುಪಿ
ಹೊರ ರಾಜ್ಯದಿಂದ ಕಾರ್ಮಿಕನಾಗಿ ಬಂದಿದ್ದ ಯುವಕನೊಬ್ಬ ಚಿಕನ್ ಪಾಕ್ಸ್ ಕಾಯಿಲೆಗೆ ತುತ್ತಾಗಿ ಕಷ್ಟಪಟ್ಟ ಘಟನೆ ಉಡುಪಿಯಲ್ಲಿ ನಡೆದಿದೆ. ಆತನು ಉಳಿದುಕೊಳ್ಳುತ್ತಿದ್ದ ರೂಮಿನಲ್ಲಿ ಸಹೋದ್ಯೋಗಿಗಳು ರೋಗ ಹರಡುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದಾಗ, ಮಾಹಿತಿ ಪಡೆದ ವಿಶು ಶೆಟ್ಟಿ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸುವ ಮುಖಾಂತರ ನೆರವು ನೀಡಿದ್ದಾರೆ.
ಚಿಕನ್ಪಾಕ್ಸ್ಗೆ ವರಿಸೆಲ್ಲಾ-ಜೋಸ್ಟರ್ ವೈರಸ್ ನಿಂದ ಉಂಟಾಗುತ್ತದೆ. ಚಿಕನ್ಪಾಕ್ಸ್ ವೇಗವಾಗಿ ಹರಡುವ ಸೋಂಕಾಗಿದ್ದು, ಚರ್ಮದ ಮೇಲೆ ತೀವ್ರ ತುರಿಕೆ ಉಂಟುಮಾಡುವ ಗುಳ್ಳೆಗಳು, ಜ್ವರ ಮತ್ತು ಸುಸ್ತು ಇದರ ಪ್ರಮುಖ ಲಕ್ಷಣಗಳಾಗಿವೆ. ಸಾಮಾನ್ಯವಾಗಿ ಆರಂಭದಲ್ಲಿ ಜ್ವರ, ಆಯಾಸ, ಹಸಿವು ಕಡಿಮೆಯಾಗುವುದು ಮತ್ತು ತಲೆನೋವು ಕಾಣಿಸಿಕೊಳ್ಳುತ್ತವೆ. ನಂತರ ಚರ್ಮದ ಮೇಲೆ ತುರಿಕೆಯುಳ್ಳ, ದ್ರವ ತುಂಬಿದ ಗುಳ್ಳೆಗಳು ಕಾಣಿಸಿಕೊಂಡು, ಕ್ರಮೇಣ ಒಣಗುತ್ತವೆ.
ಯುವಕ ಸ್ನೇಹಸಿಸ್ ಮಂಡಲ್ (25) ಪಶ್ಚಿಮ ಬಂಗಾಳದವನಾಗಿದ್ದು, ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದನು. ಇದೀಗ ಯುವಕ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸಂಬಂಧಿಕರಿಗೆ ಮಾಹಿತಿ ರವಾನಿಸಲಾಗಿದೆ.