ಕಾರವಾರ ಕ್ರಿಮ್ಸ್ನಲ್ಲಿ ಸಿಟಿ ಸ್ಕ್ಯಾನ್, ಎಂಆರ್ಐ ಸ್ಥಗಿತ, ಉಪಲೋಕಾಯುಕ್ತರ ತೀವ್ರ ಅಸಮಾಧಾನ
ಕೋಸ್ಟಲ್ ಟಾಕ್ ನ್ಯೂಸ್ | ಕಾರವಾರ
ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕಂಡುಬOದಿರುವ ಅವ್ಯವಸ್ಥೆಗಳ ಕುರಿತಂತೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಮಾಡಲಾಗುವುದು ಕರ್ನಾಟಕ ಉಪಲೋಕಾಯುಕ್ತ ಗೌರವಾನ್ವಿತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ತಿಳಿಸಿದರು. ಅವರು ಗುರುವಾರ ಕ್ರಿಮ್ಸ್ ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿ, ಸಮಗ್ರ ಪರಿಶೀಲನೆ ನಡೆಸಿದರು.
ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಉಪಲೋಕಾಯುಕ್ತರು, ಆಸ್ಪತ್ರೆಯಲ್ಲಿ ಕಂಡುಬOದ ಹಲವಾರು ಲೋಪದೋಷಗಳು ಹಾಗೂ ಸಿಬ್ಬಂದಿಗಳ ಕರ್ತವ್ಯ ಲೋಪದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಆಸ್ಪತ್ರೆಗೆ ರೋಗಿಗಳ ಅನುಕೂಲಕ್ಕಾಗಿ ಸಿಟಿ ಸ್ಕ್ಯಾನ್, ಎಂಆರ್ಐ ಮತ್ತು ಮ್ಯಾಮೋಗ್ರಫಿ ಉಪಕರಣಗಳನ್ನು ತರಿಸಲಾಗಿದ್ದರೂ, ಅವುಗಳನ್ನು ಸರಿಯಾಗಿ ಬಳಸದಿರುವುದು ಹಾಗೂ ಕೆಲವು ಕೆಲಸ ಮಾಡದಿರುವುದು ಕಂಡುಬoದಿದೆ. ಈ ದುಬಾರಿ ಯಂತ್ರಗಳು ವ್ಯರ್ಥವಾಗದಂತೆ ತಕ್ಷಣವೇ ಅವುಗಳ ಮೂಲಕ ರೋಗಿಗಳನ್ನು ಪರೀಕ್ಷಿಸುವಂತೆ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ ಎಂದರು.
ಆಸ್ಪತ್ರೆಯ ಸುತ್ತಮುತ್ತ ನೈರ್ಮಲ್ಯದ ಕೊರತೆ ಕಂಡುಬOದಿದ್ದು, ಒಳಚರಂಡಿ ಮತ್ತು ಕಲುಷಿತ ನೀರು ಹೊರಹರಿದು ಸಮುದ್ರಕ್ಕೆ ಸೇರಿ ಕಲುಷಿತಗೊಳಿಸುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಆಸ್ಪತ್ರೆಯಲ್ಲಿನ ಎಸ್.ಟಿ.ಪಿ ವ್ಯವಸ್ಥೆಯ ಕಾರ್ಯ ನಿರ್ವಹಣೇ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರ ಅವರು ಆಸ್ಪತ್ರೆ ಕಟ್ಟಡದ ಟೈಲ್ಸ್ ಅಳವಡಿಕೆ ಕಳಪೆಯಾಗಿರುವುದು ಹಾಗೂ ಗಾಳಿ-ಬೆಳಕಿನ (ವೆಂಟಿಲೇಶನ್) ವ್ಯವಸ್ಥೆ ಸರಿಯಿಲ್ಲದಿರುವ ಕುರಿತಂತೆ ಈ ಕಟ್ಟಡವನ್ನು ನಿರ್ಮಾಣ ಮಾಡಿದ ವರದಿಯನ್ನು ತರಿಸಿಕೊಳ್ಳುವುದಾಗಿ ತಿಳಿಸಿದರು.
ಜಿಲ್ಲೆಗೆ ಆಂಬ್ಯುಲೆನ್ಸ್ಗಳ ಅಭಾವವಿದ್ದು, ಹೊಸ ಆಂಬ್ಯುಲೆನ್ಸ್ಗಳ ಅಗತ್ಯತೆಯ ಬಗ್ಗೆ ವರದಿ ನೀಡಲು ಸೂಚಿಸಲಾಗಿದೆ ಎಂದರು. ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳ ಹಾಜರಾತಿ ರಿಜಿಸ್ಟರ್ ಮತ್ತು ಕ್ಯಾಶ್ ಡಿಕ್ಲೇರೇಶನ್ ಪರಿಶೀಲನೆ ನಡೆಸಲಾಗಿದ್ದು, ನಿಯಮ ಮೀರಿ ಕರ್ತವ್ಯ ಲೋಪ ಎಸಗಿದ ಸಿಬ್ಬಂದಿಗಳ ವಿರುದ್ಧ ಇಲಾಖಾ ಹಂತದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು.