ಕೋಸ್ಟಲ್ ಟಾಕ್ ನ್ಯೂಸ್ | ಉಡುಪಿ
ದಿನಾಂಕ 26.11.2026 ರಂದು ಬೆಳಿಗ್ಗೆ 09.30 ರಿಂದ ಸಂಜೆ 05:30 ಗಂಟೆಯವರೆಗೆ 33/11ಕೆವಿ ಮಲ್ಪೆ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆವಿ ಮಲ್ಪೆ ಫೀಡರ್ ಮಾರ್ಗದಲ್ಲಿ 11ಕೆವಿ ಫೀಡರ್ ವಾಹಕ ಬದಲಾವಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಗರಡಿ ಮಜಲು, ಉದ್ದಿನಹಿತ್ಲು, ಬೈಲಕೆರೆ, ಪಾಳೆಕಟ್ಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತದೆ.
ಹಾಗೆಯೇ, ದಿನಾಂಕ 27.11.2026 ರಂದು ಬೆಳಿಗ್ಗೆ 09.00 ರಿಂದ ಸಂಜೆ 05:00 ಗಂಟೆಯವರೆಗೆ 110/33/11 ಕೆವಿ ಮಣಿಪಾಲ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆವಿ ಪ್ರಗತಿನಗರ, ಕೆ.ಎಂ.ಎಫ್, ಮಣಿಪಾಲ ಟೌನ್, ಇಂದ್ರಾಳಿ, ಅನಂತನಗರ, ವಿ.ಪಿ ನಗರ, ವಿ.ಆರ್.ನಗರ, ಉದ್ಯಾವರ-2, ಮೂಡುಬೆಳ್ಳೆ ಫೀಡರ್ ಮಾರ್ಗದಲ್ಲಿ ಎ ಬಿ ಕೇಬಲ್ ನಿರ್ವಹಣೆ, ಜಿ.ಓ.ಎಸ್ ನಿರ್ವಹಣೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಪ್ರಗತಿನಗರ, ಶಾಂತಿನಗರ, ರಾಜೀವನಗರ, 80ಬಡಗುಬೆಟ್ಟು, ಈಶ್ವರನಗರ, ಸರಳೇಬೆಟ್ಟು, ಗಣೇಶ್ ಭಾಗ್, ಮಣಿಪಾಲ ಟೌನ್, ವೇಣುಗೋಪಾಲ ಟೆಂಪಲ್, ಮೀಡಿಯಾ ನೆಟ್ ವರ್ಕ್ ಏರಿಯಾ, ಹಯಗ್ರೀವನಗರ, ಲಕ್ಷ್ಮೀಂದ್ರನಗರ, ಇಂದ್ರಾಳಿ ರೈಲ್ವೆ ನಿಲ್ದಾಣ, ಹುಡ್ಕೋ, ಅನಂತನಗರ, ಕಲ್ಯಾಣನಗರ, ಸೋನಿಯಾ ಕ್ಲಿನಿಕ್, ಸಿಂಡಿಕೇಟ್ ಸರ್ಕಲ್, ಎಂ.ಜಿ.ಸಿ ಸ್ಕೂಲ್, ಬಿ.ಎಸ್.ಎನ್.ಎಲ್, ವಿದ್ಯಾರತ್ನ ನಗರ, ಡಿ.ಸಿ ಆಫೀಸ್, ಆರ್.ಟಿ.ಓ ಆಫೀಸ್, ಪೆರಂಪಳ್ಳಿ, ಸಗ್ರಿ ನೋಳೆ, ಕೊರಂಗ್ರಪಾಡಿ, ಮಾರ್ಪಳ್ಳಿ, ಕುಕ್ಕಿಕಟ್ಟೆ, ಉದ್ಯಾವರ, ಕಟಪಾಡಿ, ಮಣಿಪುರ, ಮೂಡುಬೆಳ್ಳೆ, ಮರ್ಣೆ, ಕಟ್ಟಿಂಗೇರಿ, ಕೆಮ್ತೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತದೆ.