ಕೋಸ್ಟಲ್ ಟಾಕ್ ನ್ಯೂಸ್ | ಮಣಿಪಾಲ
ಮಧುಮೇಹ ಜಾಗೃತಿ ಮಾಸದ ಅಂಗವಾಗಿ ಮುನಿಯಾಲು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಶಲ್ಯತಂತ್ರ ಹಾಗೂ ಸ್ವಸ್ಥವೃತ್ತ ವಿಭಾಗಗಳ ವತಿಯಿಂದ ನವೆಂಬರ್ 23ರಿಂದ 28ರವರೆಗೆ ಮಧುಮೇಹದ ಗಾಯಗಳ ನಿರ್ವಹಣೆಗಾಗಿ ವಿಶೇಷ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಮಣಿಪಾಲದ ಶಿವಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಮುನಿಯಾಲು ಆಯುರ್ವೇದ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಶಿಬಿರ ನಡೆಯಲಿದೆ.
ಮಧುಮೇಹದಿಂದ ಉಂಟಾಗುವ ಹಾಗೂ ದೀರ್ಘಕಾಲದಿಂದ ಗುಣವಾಗದ ಗಾಯಗಳಿಗೆ ವಿಶೇಷ ಆಯುರ್ವೇದ ಚಿಕಿತ್ಸೆಗಳು ಮತ್ತು ಔಷಧಿಗಳನ್ನು ರಿಯಾಯಿತಿ ದರದಲ್ಲಿ ಒದಗಿಸಲಾಗುವುದು. ಶಿಬಿರದ ಅಂಗವಾಗಿ ಉಚಿತ ವೈದ್ಯಕೀಯ ಸಮಾಲೋಚನೆ, ಪಂಚಕರ್ಮ ಚಿಕಿತ್ಸೆ ಮತ್ತು ಪ್ರಯೋಗಾಲಯ ಪರೀಕ್ಷೆಗಳಲ್ಲಿ ಶೇ. 50 ರಿಯಾಯಿತಿ, ಔಷಧಿಗಳ ಮೇಲೆ ಶೇ. 10 ರಿಯಾಯಿತಿ, ಫಿಸಿಯೋಥೆರಪಿ ಹಾಗೂ ಅಕ್ಯುಪಂಕ್ಚರ್ ಮತ್ತು TENS ಚಿಕಿತ್ಸೆಯಲ್ಲಿ ಶೇ. 20 ರಿಯಾಯಿತಿ ನೀಡಲಾಗುವುದು. ಅಲ್ಲದೆ ಉಚಿತ ಆಹಾರ ಪದ್ಧತಿ ಮತ್ತು ಯೋಗ ಸಮಾಲೋಚನೆ ಹಾಗೂ ಒಳರೋಗಿ ಚಿಕಿತ್ಸೆಯಲ್ಲಿ ರಿಯಾಯಿತಿ ಸೌಲಭ್ಯವೂ ಲಭ್ಯವಿರುತ್ತದೆ. ಶಿಬಿರವು ಪ್ರತಿದಿನ ಬೆಳಿಗ್ಗೆ 9ರಿಂದ ಸಂಜೆ 4.30ರವರೆಗೆ ನಡೆಯಲಿದೆ. ಮಧುಮೇಹದಿಂದ ಉಂಟಾಗುವ ಗಾಯಗಳ ಸಮಸ್ಯೆ ಹೊಂದಿರುವವರು ಹಾಗೂ ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಸಂಸ್ಥೆಯು ಮನವಿ ಮಾಡಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 81234 03233. ಟೋಲ್ ಫ್ರೀ ಸಂಖ್ಯೆ: 1800 425 3178.