ಕೋಸ್ಟಲ್ ಟಾಕ್ ನ್ಯೂಸ್ | ಮಂಗಳೂರು
ನವೆಂಬರ್ 16ರ ಸೋಮವಾರ ಮಸ್ಕತ್‌ನಿಂದ ಆಗಮಿಸಿದ ಇಬ್ಬರು ಪ್ರಯಾಣಿಕರನ್ನು ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ತಡೆದು, ಅವರಿಂದ 1.333 ಕೆ.ಜಿ. ಆಂಫೆಟಮೈನ್ ವಶಪಡಿಸಿಕೊಂಡಿದ್ದಾರೆ. ಚೆಕ್-ಇನ್ ಲಗೇಜ್‌ನಲ್ಲಿದ್ದ ಪಾತ್ರೆಗಳ ಪೆಟ್ಟಿಗೆಯೊಳಗೆ ಆಲೂಗಡ್ಡೆ ಚಿಪ್ಸ್ ಪ್ಯಾಕೆಟ್‌ಗಳಲ್ಲಿ ಮಾದಕ ವಸ್ತುವನ್ನು ಬಚ್ಚಿಡಲಾಗಿತ್ತು. ಇಬ್ಬರು ಆರೋಪಿಗಳನ್ನು ಎನ್‌ಡಿಪಿಎಸ್ ಕಾಯ್ದೆ 1985ರ ಅಡಿಯಲ್ಲಿ ಬಂಧಿಸಲಾಗಿದೆ.
ಇದೇ ನವೆಂಬರ್ 16ರಂದು ಬೆಂಗಳೂರಿನ ಕಸ್ಟಮ್ಸ್ ಅಧಿಕಾರಿಗಳು ಬ್ಯಾಂಕಾಕ್‌ನಿಂದ ಆಗಮಿಸಿದ ಪ್ರಯಾಣಿಕನೊಬ್ಬನನ್ನು ತಡೆದು, ಆತನ ಚೆಕ್-ಇನ್ ಲಗೇಜ್‌ನಲ್ಲಿ ಬಚ್ಚಿಡಲಾಗಿದ್ದ 421 ಗ್ರಾಂ ಹೈಡ್ರೋಪೋನಿಕ್ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಇದರ ಮೌಲ್ಯ ರೂ. 14.73 ಲಕ್ಷ ಎಂದು ಅಂದಾಜಿಸಲಾಗಿದೆ.