ಕೋಸ್ಟಲ್ ಟಾಕ್ ನ್ಯೂಸ್ | ಕಾಪು
ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಪಠ್ಯೇತರ ಚಟುವಟಿಕಾ ಘಟಕ, ಹವ್ಯಾಸಿ ಪ್ರಾಜೆಕ್ಟ್ಕ್ಲಬ್, ಐ.ಎಸ್.ಟಿ.ಇ ವಿದ್ಯಾಥಿ೯ ಘಟಕದ ಸಹಯೋಗದೊಂದಿಗೆ ಅಂತಿಮ ವಷ೯ದ ಇಂಜಿನಿಯರಿಂಗ್ವಿದ್ಯಾಥಿ೯ಗಳ ಪ್ರಾಜೆಕ್ಟ್ಸ್ಪಧೆ೯ ಮತ್ತು ಪ್ರದಶ೯ನವನ್ನು ನವೆಂಬರ್ 20, 2026ರಂದು ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿತ್ತು.
ಮೆಕ್ಯಾನಿಕಲ್ಇಂಜಿನಿಯರಿಂಗ್ವಿಭಾಗ, ವಿದ್ಯುನ್ಮಾನ ಮತ್ತು ಸಂವಹನ ವಿಭಾಗ, ಸಿವಿಲ್ಇಂಜಿನಿಯರಿಂಗ್ವಿಭಾಗ, ಗಣಕಯಂತ್ರ ವಿಭಾಗ, ಕೃತಕ ಬುದ್ಧಿಮತ್ತೆ ಮತ್ತು ದತ್ತಾಂಶ ವಿಜ್ಞಾನ ವಿಭಾಗ ಹಾಗೂ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕಾ ವಿಭಾಗದಿಂದ ಒಟ್ಟು 100ಕ್ಕೂ ಹೆಚ್ಚು ಪ್ರಾಜೆಕ್ಟ್ಗಳು ಪ್ರದಶ೯ನಗೊಂಡವು.
ಈ ಪ್ರಾಜೆಕ್ಟ್ಗಳು ಕೃತಕ ಬುದ್ಧಿಮತ್ತೆ, ಇಂಟನೆ೯ಟ್ಆಫ್ಥಿಂಗ್ಸ್, ಆರೋಗ್ಯ ಸೇವೆ, ಸೈಬರ್ಭದ್ರತೆ, ಸುಸ್ಥಿರ ಇಂಜಿನಿಯರಿಂಗ್, ಸ್ಮಾಟ್೯ ಕೃಷಿ, ನವೀಕರಿಸಬಹುದಾದ ಇಂಧನ, ವಿಪತ್ತು ನಿವ೯ಹಣೆ ಮತ್ತು ಪರಿಸರ ಮೇಲ್ವಿಚಾರಣೆ ಸೇರಿದಂತೆ ವಿವಿಧ ಕ್ಷೇತ್ರಗಳನ್ನು ಒಳಗೊಂಡಿದ್ದವು. ವಿದ್ಯಾಥಿ೯ಗಳು ತಮ್ಮ ತಾಂತ್ರಿಕ ಜ್ಞಾನ, ಸೃಜನಶೀಲತೆ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಸಾಮಥ್ಯ೯ವನ್ನು ಕಾಯ೯ನಿವ೯ಹಿಸುವ ಮಾದರಿಗಳು, ನೇರ ಪ್ರಾತ್ಯಕ್ಷಿಕೆಗಳು ಹಾಗೂ ಪ್ರಸ್ತುತಿಗಳ ಮೂಲಕ ಪ್ರದಶಿ೯ಸಿದರು.
ಕಾಲೇಜಿನ ಶೈಕ್ಷಣಿಕ ಡೀನ್ಡಾ. ಸುದಶ೯ನ್ರಾವ್, ವಿವಿಧ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು ಪ್ರದಶ೯ನಕ್ಕೆ ಭೇಟಿ ನೀಡಿ, ವಿದ್ಯಾಥಿ೯ಗಳೊಂದಿಗೆ ಸಂವಾದ ನಡೆಸಿ, ಅವರ ಪ್ರಯತ್ನಗಳನ್ನು ಶ್ಲಾಘಿಸುವುದರ ಜೊತೆಗೆ ಅಗತ್ಯ ಸಲಹೆಗಳನ್ನು ನೀಡಿದರು. ಪ್ರದಶಿ೯ಸಲಾದ ಪ್ರಾಜೆಕ್ಟ್ಗಳಲ್ಲಿ ಎರಡು ಅತ್ಯುತ್ತಮ ಪ್ರಾಜೆಕ್ಟ್ಗಳಿಗೆ ಹಾಗೂ ಅತ್ಯುತ್ತಮ ವಿಡಿಯೋಗಳಿಗೆ ನಗದು ಬಹುಮಾನ ನೀಡಲು ಆಯ್ಕೆ ಮಾಡಲಾಯಿತು.